ಕಾಫಿ ವಿತ್ ಮೈ ವೈಫ್ ಈ ವಾರ
Send us your feedback to audioarticles@vaarta.com
ಕಾಫಿ ವಿತ್ ಮೈ ವೈಫ್ ಇನ್ನೇನು ಇನ್ನೊಬ್ಬರ ಹೆಂಡ್ತಿ ಜೊತೇನೇ! ಅವರ ಹೆಂಡತಿ ಜೊತೆ ಕಾಫಿ ಕುಡಿಯದೆ ಬೇರೆ ಅವರ ಹೆಂಡತಿ ಜೊತೆ ಕಾಫಿ ಕುಡಿದರೆ ಆಗುವ ರಾದ್ದಾಂತ ಗೊತ್ತಿದೆ ತಾನೇ. ಅದೇ ಪತಿ ಪತ್ನಿ ಔರ್ ವೋಹ್ ಗತಿಯೇ ಬರುವುದು.
ಆದರೆ ಈ ಚಿತ್ರದ ಮಜವೆ ಬೇರೆ ಅನ್ನಿಸುತ್ತಿದೆ. ಆಂಧ್ರ ಪ್ರದೇಶದಲ್ಲಿ ಅನಲಗುರು ಮದನ್ ಎಂದೇ ಕರೆಯಲ್ಪಡುವ ವ್ಯಕ್ತಿ ಇಂದು ಕನ್ನಡ ಸಿನೆಮಕ್ಕೆ ಕೇವಲ ಶೀರ್ಷಿಕೆ ಕೇಳಿಯೇ ಕಥೆ ಸಿದ್ದಮಾಡಿದ್ದಾರೆ. ಅಂದ ಹಾಗೆ ಅನಲಗುರು ತೆಲುಗು ಸಿನೆಮಾ ಕನ್ನಡದಲ್ಲಿ ಸಿರಿವಂತ ಅಂತ ಬಂದಿದ್ದು ಇದೆ.
ಮದನ್ ಅವರ ಬುದ್ದಿವಂತಿಕೆ ತುಂಬಿದ ಕಥೆಗೆ ನಮ್ಮ ನಾಡಿನವರಾದ ರಿಚರ್ಡ್ ಲೂಯಿಸ್ ಅವರು ಕಾಫಿ ಬೀಜವನ್ನು ಹುರಿದಿದ್ದಾರೆ. ಅರ್ಥಾತ್ ಅವರ ಸಂಭಾಷಣೆಯಲ್ಲಿ ಹದ ಮಾಡಿ ಒಳ್ಳೆಯ ಮಿಶ್ರಣದ ಕಾಫಿ ಪುಡಿ ಮಾಡಿದ್ದಾರೆ.
ಕನ್ನಡ ಸಿನೆಮಾಗಳ ಗಡಿ ಈಗಾಗಲೇ ನೂರು ದಾಟಿದೆ. ಈ ವಾರವು ಮೂರು ಸಿನೆಮಗಳು ಲಗ್ಗೆ ಇಡುತ್ತಿದೆ. ಮೂರರಲ್ಲಿ ಶೀರ್ಷಿಕೆ ಇಂದಲೇ ಆಪ್ಯಾಯಮಾನ ಆಗಿರುವುದು ಕಾಫಿ ವಿತ್ ಮೈ ವೈಫ್.
ದಾಸರು ಹೆಂಡತಿ ಪ್ರಾಣ ಹಿಂಡೂತಿ ಎಂದಿದ್ದಾರೆ. ವೈಫ್ ಒಂದು ನೈಫ್ ಅಂದವರು ಇದ್ದಾರೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತ ಹೇಳಿಕೆ ಇದೆ. ಆದರೆ ಇಲ್ಲಿ ಗಂಡ ಹೆಂಡತಿ ಜಗಳ ಬೆಳಗಿನ ಕಾಫಿ ಹೀರುವಾಗ ಅನ್ನಿಸುತ್ತದೆ. ಕಾಫಿ ಕೊಟ್ಟ ಹೆಂಡತಿ ಅನಂತರದ ಫಜೀತಿ ಅದನ್ನು ಹ್ಯಾಗೆ ಸರಿ ರೀತಿ ಮಾಡುವುದು ಎಂಬುದು ಕಥಾವಸ್ತು. ಒಟ್ಟಿನಲ್ಲಿ ಬಿಟ್ವೀನ್ ಕಪ್ ಅಂಡ್ ಲಿಪ್ ಶಟ್ ಅಪ್ ಅನ್ನುವ ಪರಿಸ್ಥಿಯೋ ಕಾದು ನೋಡಬೇಕಿದೆ.
ನೇಹ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅವರ ನೀಲಶಂಕರ್ ಅವರ ನಿರ್ಮಾಣದ ಈ ಚಿತ್ರ ತೆಲುಗು ಸಿನೆಮಾಗಳ ನೃತ್ಯ ಸಂಯೋಜಕ ವಿದ್ಯಾಸಾಗರ್ ಅವರೇ ನಿರ್ದೇಶನ ಮಾಡಿರುವ ಮೊದಲ ಚಿತ್ರ. ಇದು ತೆಲುಗು ಭಾಷೆಯಲ್ಲೂ ಸಹ ಸಿದ್ದವಾಗಿದೆ. ಮಂತ್ರ ಆನಂದ್ ಅವರ ಸಂಗೀತದಲ್ಲಿ ಕೇಳುವು ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.ವಿಶ್ವೇಶ್ವರ ಅವರ
Follow us on Google News and stay updated with the latest!
-
Contact at support@indiaglitz.com
Comments